No Hindi Diwas

Hindi Diwas ಆಚರಣೆಯನ್ನು ವಿರೋಧಿಸಿ ಜನತಾ ದಳ (JANATADAL)ಪಕ್ಷವು ದಿನಾಂಕ 14-09-2022 ರಂದು ಮಧ್ಯಾಹ್ನ 3:00 ಘಂಟೆಗೆ ಪಕ್ಷದ ಕಚೇರಿ ಜೆಪಿ ಭವನ(JP BHAVAN) ಮುಂಭಾಗದ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುಧ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

https://www.drsyedmohidaltaf.com/quotes/

ಬಲವಂತದ ಹಿಂದಿ (Hindi) ಹೇರಿಕೆ ಹಾಗೂ ಒಕ್ಕೂಟ ಸರ್ಕಾರದ ಪ್ರಯೋಜಕತ್ವದಲ್ಲಿ ನಡೆಯುವ ಹಿಂದಿ ದಿವಸ ಆಚರಣೆಯನ್ನು ವಿರೋದಿಸಿ ಮಾಜಿ ಮುಖ್ಯ ಮಂತ್ರಿ ಹಾಗೂ,

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಎಚ್ ಡಿ ಕುಮಾರಸ್ವಾಮಿ (H.D Kumaraswamy)ಅವರ ನೇತೃತ್ವದಲ್ಲಿ ಪಕ್ಷದ ಶಾಸಕರೊಂದಿಗೆ ವಿಧಾನಸೌಧದ (Vidhansoudha) ಗಾಂಧಿ ಪ್ರತಿಮೆ ಬಳಿ ನಡೆಯುತ್ತಿರುವ ಪ್ರತಿಭಟನೆ.

H.D Kumaraswamy : ಭಾರತ ಒಕ್ಕೂಟ ರಾಷ್ಟ್ರ. ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರ. ಅನೇಕ ಭಾಷೆಗಳ ತೊಟ್ಟಿಲು. ಆದರೆ ಒಂದೇ ಭಾಷೆಯನ್ನು ವೈಭವೀಕರಿಸುವ, ಹೇರುವ ಹುಂಬ ಪ್ರಯತ್ನವೇಕೆ ?

ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ದಿವಸ ಆಚರಣೆಯನ್ನೂ ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಒಕ್ಕೂಟದ ಎಲ್ಲಾ ಭಾಷೆಗಳಂತೆ ಹಿಂದಿಯೂ ಒಂದು ಭಾಷೆಯಷ್ಟೇ. ಕೇಂದ್ರ ಸರಕಾರ ಹಿಂದಿಗೆ ʼಇಂದ್ರ ವೈಭೋಗʼ ನೀಡಿ ಅನ್ಯ ಭಾಷೆಗಳನ್ನು ಬೀದಿಪಾಲು ಮಾಡುವುದನ್ನು ಸಹಿಸಲಾಗದು.

ಹಿಂದಿ ಹೇರುವವರಿಗೆ ತಿಳಿದಿರಲಿ. ನಮ್ಮ ಕನ್ನಡ (Kannada) ಅಭಿಜಾತ ಭಾಷೆ. ನಮ್ಮ ಕನ್ನಡ ಸಾವಿರಾರು ವರ್ಷಗಳ ಘನ ಚರಿತ್ರೆಯುಳ್ಳ ಭಾಷೆ.

ನಮ್ಮ ಕನ್ನಡ 6.4 ಕೋಟಿ ಜನರ ಹೃದಯಮಿಡಿತ. ನಮ್ಮ ಪಾಲಿನ ಮಾತೃಸ್ವರೂಪಿಣಿ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು.

ಹಿಂದಿ ದಿವಸ ಆಚರಣೆ (Celebration) ಅಸಮರ್ಪಕ ಮತ್ತು ಅನಗತ್ಯ. ಹಿಂದಿ ಹೇರಿಕೆಯಿಂದ ಬಹುಭಾಷೆಯ ಭಾರತದ ನೆಮ್ಮದಿ ಕದಡುವುದು ಬೇಡ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಹಿಂದಿಯೇತರ ರಾಜ್ಯಗಳಲ್ಲಿ ಕೈಗೊಳ್ಳುವ ಹಿಂದಿ ಪ್ರಚಾರ ಹಾಗೂ ಹಿಂದಿ ಬಳಸಬೇಕು ಎನ್ನುವ ನಿಯಮಗಳು ನಮ್ಮ ನೆಲದಲ್ಲಿ ನಮ್ಮ ನುಡಿಯಲ್ಲಿ ಸೇವೆ ಹಾಗು ಉದ್ಯೋಗ ಪಡೆಯುವುದರಿಂದ ನಮ್ಮನ್ನು ವಂಚಿತರನ್ನಾಗಿಸುತ್ತಿದೆ.

ಭಾಷೆಯ ನೆಲೆಗಟ್ಟಿನ ಮೇಲೆ ರಚನೆಗೊಂಡಿರುವ ಭಾರತದಲ್ಲಿ (India) 780 ಕ್ಕೂ ಹೆಚ್ಚು ಭಾಷೆಗಳಿವೆ(Language). ಅವುಗಳಲ್ಲಿ 121 ಭಾಷೆಗಳನ್ನು 10ಸಾವಿರಕ್ಕೂ ಹೆಚ್ಚು ಜನರು ಬಳಸುತ್ತಾರೆ

ಭಾರತದಲ್ಲಿ 22 ಅಧಿಕೃತ ಭಾಷೆಗಳಿದ್ದೂ, ದೆಹಲಿಯ ಸರ್ಕಾರ ಹಿಂದಿ ದಿವಸವನ್ನು ಆಚರಿಸುವ ಮೂಲಕ ಭಾರತವನ್ನು ಹಿಂದಿ ಮಾತನಾಡುವ ದೇಶ ಎಂದು ಬಿಂಬಿಸಲು ಹೊರಟಿದೆ.

ಭಾರತ ರೂಪುಗೊಂಡ ಆಶಯವು ಸಾಕಾರಗೊಳ್ಳಬೇಕಾದರೆ ಕೇಂದ್ರ ಸರ್ಕಾರ (Central Govt) ಹಿಂದಿ ದಿವಸವನ್ನು ಭಾರತದ ಎಲ್ಲ ಭಾಷೆಗಳ ದಿವಸವನ್ನಾಗಿ ಆಚರಿಸಬೇಕು. ಇನ್ನಿತರ (Other) ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಗಳನ್ನಾಗಿ ಒಪ್ಪಿ ಭಾಷಾ ಸಮಾನತೆಯನ್ನು (Linguistic equality) ಎತ್ತಿ ಹಿಡಿಯಬೇಕು

ಜೆಡಿಎಸ್ ಪಕ್ಷದ ಅನೇಕ ಕಾರ್ಯಕರ್ತರು, ಮುಖಂಡರು, ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published.